ಡಿಎಂಕೆ ಪಕ್ಷವನ್ನು ತಮ್ಮ ರಾಜಕೀಯ ಶತ್ರು ಹಾಗೂ ಬಿಜೆಪಿಯನ್ನು ತಮ್ಮ ಸೈದ್ಧಾಂತಿಕ ಶತ್ರು ಎಂದು ವಿಜಯ್ ಅನೇಕ ಬಾರಿ ಹೇಳಿದ್ದಾರೆ, ತಮಿಳುನಾಡಿನಲ್ಲಿ ದಶಕಗಳಿಂದ ಮನೆಮಾಡಿರುವ ಕುಟುಂಬ ರಾಜಕೀಯ ಮತ್ತು ಭ್ರಷ್ಟಾಚಾರವನ್ನು ಕಿತ್ತೊಗೆಯುವುದೇ ತಮ್ಮ ಮೊದಲ ಆದ್ಯತೆ ಎಂದು ಘೋಷಿಸಿರುವ ಟಿವಿಕೆ ಮುಖ್ಯಸ್ಥರು, ಪಾರದರ್ಶಕ ಆಡಳಿತ ಹಾಗೂ ಮಹಿಳಾ ಸುರಕ್ಷತೆಯ ಭರವಸೆಯನ್ನು ನೀಡಿದ್ದಾರೆ.